Monday, September 10, 2007

ನಿನ್ನ ನೆನಪು...

ದುಡಿದು ದಣಿದ ನೊಸಲ ಮೇಲೆ
ಬೆವರ ಮುತ್ತಿನ ಹನಿಸಾಲು
ಅದಕೆ ಮೆಲುವಾಗಿ ಮುತ್ತಿತ್ತ ತಂಗಾಳಿ
ನಿನ್ನ ನೆನಪು

-----------------------------------------------------------------

ಒಮ್ಮೆ ನಿನ್ನ ನೆನಪು
ಮತ್ತೊಮ್ಮೆ ನೀನಿಲ್ಲೇ ಇರುವೆ ಎಂಬ ಅನಿಸಿಕೆ
ಬಿಕ್ಕಲಿಕೆ ಬಂದಾಗ ಒಮ್ಮೆ ನೀ ನನ್ನ ನೆನೆದೆಯೇನೋ
ಎಂಬಂತೆ ಬೆಚ್ಚಗಿನ ಭಾವ
ಮರೆತರೂ ಮರೆಯಲಿ ಹ್ಯಾಂಗಾ
ನನ್ನಿಂದ ಕವಿತೆ ಬರೆಸಿದ ಆ ಮೊಗವ !

No comments: