Tuesday, May 13, 2008

ಹೇಳಿ ಹೋಗು ಕಾರಣ....

ಹೇಳ ಹೆಸರಿಲ್ಲದ ಹಲವು
ಕಾರಣಗಳು ಮನ ನೋಯಲು
ಆಪ್ತವಾಗಿರಲಿ ಈ ಹಂಗು ಸಾಕು
ಕಾದಿದೆ ಆ ಒಂದು ಕ್ಷಣ ನೀ
ತೆರೆವ ಬಾಗಿಲಿಗೆ,ಕರೆವ ದನಿಗೆ
ಪುಟ ತೆರೆದಿದೆ ಇನ್ನೂ ಅಲ್ಲೆ
ನೀನಿಲ್ಲದ ಖಾಲಿತನ ಹಿಂಡುತ್ತಿದೆ
ಎದೆ ಹೊತ್ತಿ ಉರಿಯುತ್ತಿದೆ
ಉಸಿರು ಬತ್ತಿ ಸಾಯುತ್ತಿದೆ
ದಿಕ್ಕು ಬದಲಾದರೇನಂತೆ
ಹಾದಿ ಬಯಲಾದರೇನಂತೆ
ಒಮ್ಮೆ ಹೇಳಿ ಹೋಗು ಕಾರಣ
ಮರೆವೆನೆಂದು ಕುಳಿತರೆ
ನಿನ್ನ ನೆನಪುಗಳ
ಮೆರವಣಿಗೆಗಳ ಸಾಲು ಸಾಲು
ಮರಳಿ ಬರಲಾರದ ಹೃದಯವ
ನೆನೆದು ಮನದ
ಮುಗಿಲೊಳಗೀಗ ಮಳೆಯಿಲ್ಲ..!!

4 comments:

ಕುಕೂಊ.. said...

ಹಬ್ಬ,
ವಿರಹಕ್ಕೆ ಎಷ್ಟೊಂದು ಆಯಾಮ,

ಮರೆವೆನೆಂದು ಕುಳಿತರೆ
ನಿನ್ನ ನೆನಪುಗಳ
ಮೆರವಣಿಗೆಗಳ ಸಾಲು ಸಾಲು.

ನಾನು ಮರೆತೆನೆಂದರು ಮರೆಯದ ಈ ಸಾಲುಗಳ ಮೆರವಣಿಗೆ ನಡೆದಿದೆ ನನ್ನ ಮನದಲ್ಲಿ. ಮನಸ್ಸು ಹಾ.. ಎನ್ನಿಸುವ ಪದಗಳ ಜೋಡಣೆ. ನನಗೂ ಕವನ ಬರೆಯೋ ಗೀಳು ಇದೆ. ನಿಮ್ಮ ಈ ಕವನ ನೋಡಿ ನಿಜವಾಗಲು ನನಗೆ ಹೊಟ್ಟೆ ಕಿಚ್ಚಾಯಿತು.
ಆ ಹೊಟ್ಟೆ ಕಿಚ್ಚಿನಲ್ಲೇ ನಾನೊಂದು ಕವಿತೆ ಬರಿತೀನಿ ಬಿಡಿ.
ತುಂಬಾ ಸೊಗಸಾದ ಸಾಲುಗಳು. ಈಗೇ ಬರೆಯಿರಿ.
ಬಾಳದಾರಿಯಿಂದ ನನ್ನ ಗುಬ್ಬಚ್ಚಿ ಗೂಡಿಗೆ ಬಂದು ಬೇಟಿಕೊಡಿ.

http://baaladaari.blogspot.com/
http://www.gubbacchi-goodu.blogspot.com/

ಧನ್ಯವಾದಗಳೊಂದಿಗೆ.
ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ
16/0/08

ವಿ.ರಾ.ಹೆ. said...

ನಮಸ್ತೆ,

enjoyed ur blog.. especially poerms..

thank you..

Mee said...

Thank you friends..!!

ಶ್ರೀಧರ್ said...

ಮೊದಲಿಗೆ ಏನೂ ಅಲ್ಲ ಅನಿಸೋ ಕವನ ಕೊನೆಯಲ್ಲಿ ಎಲ್ಲಾ ಅನಿಸುತ್ತದೆ. ಚೆನ್ನಾಗಿದೆ. ಧನ್ಯವಾದಗಳು