Tuesday, October 31, 2017

ಮಾಧವ

ಮಾಧವ ಸೋತದ್ದೀಗ ಮೀರಳಿಗೆ
ಮಗು ಮನಸ್ಸಿಗೋ, ಮುದ್ದು ನಗುವಿಗೋ
ಮೆಲ್ಲ ಬಳಿಸರಿದು ಮೂಗುಜ್ಜುವ ಪರಿಗೋ
ಮಧುರೆಯ ಬಿಟ್ಟು ಮಡದಿಯ ತೊರೆದು
ಮಾಧವ ನಡೆದದ್ದು ಮೀರಳೆಡೆಗೆ...